ಮನೆ | ಸುದ್ದಿಗಳು | ಸದಾನುಮಾನದ ಪ್ರಶ್ನೆಗಳು | ನಿವೇಶನ ಪಟ | ನಮ್ಮನ್ನು ಸಂಪರ್ಕಿಸಿ | ಆರ್ ಬಿ ಅಯ್ ಸಂಪರ್ಕಕೊಂಡಿ
English Website | हिंदी वेबसाइट
ಗ್ರಾಹಕ ಕಾಳಜಿ
ಆನ್ ಲೈನ್ ಸಾಲ ಮನವಿ
ದೂರು ಪರಿಹಾರ
ಮಾಹಿತಿ ಹಕ್ಕು ಕಾಯಿದೆ 2005
ಷೇರುದಾರರ ಮಾಹಿತಿ
ಜಾಹೀರಾತು/ ಟೆಂಡರ್/ ಬಿಡ್
ಬಡ್ಡಿ ದರ
ಸೇವಾ ದರಗಳು
ನಗದು ನಿರ್ವಹಣಾ ಸೇವೆಗಳು
ಸಿಂಡಿಕೇಟ್ ಗ್ಲೋಬಲ್ ಕಾರ್ಡ್ಸ್
ಹಣಕಾಸು ಫಲಿತಾಂಶ
 

 

ಮುಖಪುಟ >> ನಮ್ಮ ಬಗ್ಗೆ
 
ಸಿಂಡಿಕೇಟ್ ಬ್ಯಾಂಕ್
ಹೆಡ್ ಆಫೀಸ್ : ಮಣಿಪಾಲ - 576104
 
ಸಂಕ್ಷಿಪ್ತ ಇತಿಹಾಸ
 

ಭಗವಾನ್ ಶ್ರೀಕೃಷ್ಣನ ವಾಸಸ್ಥಾನವಾದ, ಕರಾವಳಿ ಕನರ್ಾಟಕದ ಉಡುಪಿಯಲ್ಲಿ ಸಿಂಡಿಕೇಟ್ ಬ್ಯಾಂಕ್ 1925ರಲ್ಲಿ ಸ್ಥಾಪನೆಗೊಂಡಿತು. ಸಾಮಾಜಿಕ ಕಲ್ಯಾಣದ ದೃಢ ಬದ್ಧತೆಯಿದ್ದ ಮೂವರು ಕನಸುಗಾರರಾದ- ವ್ಯಾಪಾರಸ್ಥ ಶ್ರೀ ಉಪೇಂದ್ರ ಅನಂತ ಪೈ, ಎಂಜಿನಿಯರ್ ಆಗಿದ್ದ ಶ್ರೀ ವಾಮನ ಕುಡ್ವ ಮತ್ತು ವೈದ್ಯರಾಗಿದ್ದ ಡಾ.ಟಿ.ಎಂ.ಎ.ಪೈ- ಇವರು 8000 ರೂಪಾಯಿಗಳ ಬಂಡವಾಳವನ್ನು ತೊಡಗಿಸಿ ಈ ಬ್ಯಾಂಕನ್ನು ಆರಂಭಿಸಿದರು. ಸಮುದಾಯದಿಂದ ಸಣ್ಣ ಉಳಿತಾಯವನ್ನು ಕ್ರೋಢೀಕರಿಸಿ, ಆಥರ್ಿಕ ಬಿಕ್ಕಟ್ಟಿಗೆ ಸಿಲುಕಿದ್ದ ಸ್ಥಳೀಯ ನೇಕಾರರಿಗೆ ಹಣಕಾಸಿನ ನೆರವು ನೀಡುವುದು ಅವರ ಪ್ರಾಥಮಿಕ ಧ್ಯೇಯೋದ್ದೇಶವಾಗಿತ್ತು. 1928ರಲ್ಲಿ ಆರಂಭಿಸಿದ ಪಿಗ್ಮಿ ಠೇವಣಿ ಯೋಜನೆಯಲ್ಲಿ ತನ್ನ ಏಜೆಂಟರ ಮೂಲಕ ಬ್ಯಾಂಕ್, ಠೇವಣಿದಾರರ ಮನೆಬಾಗಿಲಿಗೆ ತೆರಳಿ ದಿನಕ್ಕೆ ಎರಡಾಣೆಯಷ್ಟು ಕಡಿಮೆ ಹಣವನ್ನು ಸಂಗ್ರಹಿಸತೊಡಗಿತು. ಈ ಯೋಜನೆ ಇವತ್ತು ಬ್ಯಾಂಕಿನ `ಬ್ರಾಂಡ್ ಈಕ್ವಿಟಿ' ಯೋಜನೆಯಾಗಿದ್ದು ಪ್ರತಿದಿನ 2 ಕೋಟಿ ರೂಪಾಯಿಗಳನ್ನು ಬ್ಯಾಂಕ್ ಸಂಗ್ರಹಿಸುತ್ತಿದೆ.

 

ಭಾರತದಲ್ಲಿ ಪ್ರಗತಿಪರ ಬ್ಯಾಂಕಿಂಗ್ನ ವಿವಿಧ ಹಂತಗಳ ಜತೆಗೇ ಸಿಂಡಿಕೇಟ್ ಬ್ಯಾಂಕಿನ ಏಳಿಗೆಯೂ ಗುರುತಿಸಿಕೊಂಡಿದೆ. 80 ವರ್ಷಗಳ ಮುಂಚೂಣಿಯ, ಅನುಭವೀ  ವಹಿವಾಟಿನಲ್ಲಿ ಬ್ಯಾಂಕು ಎರಡು ಅಥವಾ ಮೂರು ತಲೆಮಾರುಗಳ ಸದೃಢ ಗ್ರಾಹಕ ತಳಹದಿಯನ್ನೂ ನಿಮರ್ಿಸಿಕೊಂಡಿದೆ. ಗ್ರಾಮೀಣ ಭಾರತದಲ್ಲಿ ದೃಢ ಬೇರುಗಳನ್ನು ಹೊಂದಿ, ನೆಲಮಟ್ಟದ ವಾಸ್ತವವನ್ನೂ ಅರ್ಥ ಮಾಡಿಕೊಂಡಿರುವ ಬ್ಯಾಂಕ್ನ ಗ್ರಹಿಕೆಯಲ್ಲಿ ಭವಿಷ್ಯದ ಭಾರತದ ದೂರದೃಷ್ಟಿಯೂ ಅಡಗಿದೆ. ತನ್ನ ವಿಶಿಷ್ಟ ಸಾಮಾಜಿಕ-ಆಥರ್ಿಕ ಹಾಗೂ ಸಾಂಸ್ಕೃತಿಕ ನೀತಿಗಳನ್ನು ಇಟ್ಟುಕೊಂಡೇ ಬ್ಯಾಂಕು ಹೊಸ ಆಲೋಚನೆಗಳೊಂದಿಗೆ ಬ್ಯಾಂಕಿಂಗ್ನಲ್ಲಿ ಹೊಸ ಪ್ರಯೋಗಗಳನ್ನು ಪ್ರಚಾರ ಮಾಡುತ್ತಿದೆ. ಬ್ಯಾಂಕಿನ ಮತ್ತು ಗ್ರಾಹಕರ ಪರಸ್ಪರ ಸಂರಕ್ಷಣೆಯೊಂದಿಗೆ ಒಟ್ಟಿಗೇ ಬೆಳೆಯುವ ತತ್ವಜ್ಞಾನವು ಅತ್ಯುತ್ತಮ ಪ್ರತಿಫಲವನ್ನು ನೀಡಿದೆ. ಸಿಂಡಿಕೇಟ್ ಬ್ಯಾಂಕ್ ದೇಶದೆಲ್ಲೆಡೆ ಅಭಿವೃದ್ಧಿಯ ಹರಿಕಾರನಾಗಿ ಕೆಲಸ ನಿರ್ವಹಿಸುತ್ತಿದ್ದು, ಮುಖ್ಯವಾಗಿ ಶ್ರೀಸಾಮಾನ್ಯನನ್ನು ವೈಯಕ್ತಿಕ ನೆಲೆಯಲ್ಲಿ ಹಾಗೂ ಗ್ರಾಮೀಣ ಮತ್ತು ನಗರದ ಸಾಮೂಹಿಕ ನೆಲೆಯಲ್ಲಿ ಗಮನದಲ್ಲಿ ಇಟ್ಟುಕೊಂಡಿದೆ.

 

21ನೇ ಶತಮಾನದ ಮಾಹಿತಿ ತಂತ್ರಜ್ಞಾನ ಮತ್ತು ಜ್ಞಾನಾಧಾರಿತ ಸ್ಪಧರ್ೆಯಲ್ಲಿ ಎದುರಾಗುವ ಎ್ಲಲ ಸವಾಲುಗಳನ್ನು ಎದುರಿಸಲೂ ಬ್ಯಾಂಕ್ ಸರ್ವಸನ್ನದ್ಧವಾಗಿದೆ. ಚಟುವಟಿಕೆಯ ಎಲ್ಲ ರಂಗಗಳಲ್ಲೂ ಗ್ರಾಹಕ ಸಂತೃಪ್ತಿಯನ್ನು ಹೊಂದಲು ಸಮಗ್ರ ಮಾಹಿತಿ- ತಂತ್ರಜ್ಞಾನ ಯೋಜನೆಯನ್ನು ಜಾರಿಗೊಳಿಸಿದ್ದು, ಬ್ಯಾಂಕಿನ ಸಿಬ್ಬಂದಿಯ ಸಾಮಥ್ರ್ಯ ಮತ್ತು ಜ್ಞಾನದ ವಿಸ್ತರಣೆಗೆ ವೈವಿಧ್ಯಮಯ ತರಬೇತಿ ಕಾರ್ಯಕ್ರಮಗಳನ್ನೂ ರೂಪಿಸಲಾಗಿದೆ. ಕೇಂದ್ರೀಕೃತ ಬ್ಯಾಂಕಿಂಗ್ ಸೊಲ್ಯೂಷನ್ (ಸಿಬಿಎಸ್) ಎಂಬ ಮಹತ್ವಾಕಾಂಕ್ಷೆಯ ತಂತ್ರಜ್ಞಾನ ಯೋಜನೆಯನ್ನು ಪ್ರಕಟಿಸಿ, ಕೇವಲ ನಾಲ್ಕು ವರ್ಷಗಳ ಅವದಿಯಲ್ಲಿ ಒಟ್ಟು 500 ವ್ಯೂಹಾತ್ಮಕ ಶಾಖೆಗಳ ಮತ್ತು ಅವುಗಳ ಎಟಿಎಮ್ಗಳ ಜಾಲವನ್ನು (ನೆಟ್ವಕರ್್) ಬ್ಯಾಂಕ್ ರೂಪಿಸಿದೆ.

 

 
 
  ಮನೆ  |   ಉತ್ಪನ್ನ ಹಾಗೂ ಸೇವೆಗಳು  |   ಅನಿವಾಸಿ ಭಾರತೀಯ ಸೇವೆಗಳು  |  ನೇಮಕಾತಿ|   ನಮ್ಮನ್ನು ಸಂಪರ್ಕಿಸಿ
ಇಐ 5.5 ನಲ್ಲಿ ಉತ್ತಮ ವೀಕ್ಷಣೆ ಸಾಧ್ಯ- ಸ್ಕ್ರೀನ್ ರೆಸೆಲ್ಯೂಷನ್ 800/ 600 ಇಡಬೇಕು.
  ಕಾಪಿರೈಟ್್ 2006, ಸಿಂಡಿಕೇಟ್ ಬ್ಯಾಂಕ್. ಎಲ್ಲ ಹಕ್ಕುಗಳನ್ನೂ ಕಾಯ್ದಿರಿಸಲಾಗಿದೆ. ಹೊಣೆಯಲ್ಲ   |  ಪ್ರೈವೆಸಿ ಹೇಳಿಕೆ